ಭಾನುವಾರ, ನವೆಂಬರ್ 22, 2009

ಕನ್ನಡ ರಾಜ್ಯೋತ್ಸವ - ೨೦೦೯


KannadaRajyothsava2009@ALU


ವಿಡಿಯೋ:
http://www.youtube.com/user/shrigandhaALU


ನವೆಂಬರ್ ೧೨ಗುರುವಾರದಂದುನಮ್ಮ ಅಲ್ಕಟೆಲ್-ಲ್ಯೂಸೆಂಟ್ ನಲ್ಲಿ, "ಶ್ರೀಗಂಧ ಕನ್ನಡ ಬಳಗ"ದ ನೇತೃತ್ವದಲ್ಲಿ "ಕನ್ನಡ ರಾಜ್ಯೋತ್ಸವಸಮಾರಂಭವನ್ನು ಹಮ್ಮಿಕೊಂಡಿದ್ದೆವುಅಂದು ಎಲ್ಲೆಲ್ಲೂ ಹಬ್ಬದವಾತಾವರಣಬೆಳಿಗ್ಗೆ ಎಲ್ಲರನ್ನೂ ಮೊದಲು ಸ್ವಾಗತಿಸಿದ್ದು ಮಾವಿನ ತೋರಣಗಳುಹೂವಿನ ಗುಚ್ಛಗಳುದೀಪಾಲಂಕೃತವಾಗಿನಿಂತಿದ್ದ ಕನ್ನಡಾಂಬೆ ಹಾಗೂ ಕರ್ನಾಟಕದ ಭೂಪಟ ಮತ್ತು ಬಾವುಟಗಳನ್ನೊಳಗೊಂಡ ಸುಂದರ ರಂಗೋಲಿ.  ಅದಕ್ಕೆ ಪೂರಕವಾಗಿನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೆಂಬಂತೆ ಅಲ್ಲಿಯೇ ಪಕ್ಕದಲ್ಲಿ ಹೆಮ್ಮೆಯಿಂದ ನಿಂತಿತ್ತು ಮೈಸೂರಿನ ಅರಮನೆ ಮತ್ತುಜಂಬೂಸವಾರಿ.

ಕಾರ್ಯಕ್ರಮವನ್ನು ಕೇವಲ ಕನ್ನಡಿಗರನ್ನು ಮಾತ್ರವಲ್ಲದೇಕನ್ನಡೇತರರ ಸಹೋದ್ಯೋಗಿಗಳನ್ನೂ ಸೇರಿಸಿಕೊಂಡುಯೋಜಿಸಲಾಗಿತ್ತುಹಲವು ದಿನಗಳಿಂದ ಸಹೋದ್ಯೋಗಿಗಳನ್ನು ಕುತೂಹಲಕ್ಕೀಡು ಮಾಡಿದ್ದ ಆಹ್ವಾನ ಫಲಕಎಲ್ಲರೂ ತಮ್ಮದೇರೀತಿಯಲ್ಲಿ ಹಬ್ಬಕ್ಕೆ ಅಣಿಯಾಗಲು ಅನುವು ಮಾಡಿಕೊಟ್ಟಿತ್ತು.  ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು.

ದಿನ ಪೂರ್ತಿಉಪಹಾರ ಮಂದಿರದಲ್ಲಿ ಕನ್ನಡದ ಸುಮಧುರ ಹಾಡುಗಳುಕನ್ನಡದ ಬಗೆಗಿನ ದೃಶ್ಯಾವಳಿಗಳು ಜನಮನ ತಣಿಸಿತ್ತು.  ಟೋಟಲ್ ಕನ್ನಡ.ಕಾಂ ನವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆಸಾಹಿತ್ಯಚಲನಚಿತ್ರಗಳಿಗೆ ಸಂಬಂಧಪಟ್ಟಪುಸ್ತಕಗಳುಹಾಡಿನ ಮುದ್ರಿಕೆಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಕನ್ನಡಿಗರನ್ನು ಸೆರೆಹಿಡಿದರೆಪ್ರವಾಸೋದ್ಯಮಇಲಾಖೆಯ ಕೈಪಿಡಿಗಳ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿಕನ್ನಡೇತರ ಮಿತ್ರರ ಆಸಕ್ತಿ ಕೆರಳಿಸಿತ್ತು.

ಅಂದುಕೊಂಡಂತೆಸಂಜೆ  ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹೊತ್ತಿಗೆನಿರೀಕ್ಷೆಗೂ ಮೀರಿ ಕಿಕ್ಕಿರಿದು ಸೇರಿದ್ದಕನ್ನಡ ಪ್ರೇಮಿಗಳನ್ನು ನೋಡಿ ಹೃದಯ ತುಂಬಿಬಂದಿತ್ತುನಮ್ಮ ಕಛೇರಿಯ ಮುಖ್ಯಸ್ಥೆ ಶ್ರೀಮತಿ ಚಿತ್ರಾ ಕಸ್ತೂರಿಯವರುಸಾಂಪ್ರದಾಯಿಕವಾಗಿ ದೀಪ ಬೆಳಗುತ್ತಿದ್ದರೆಹಿನ್ನೆಯಲ್ಲಿ "ಹಚ್ಚೇವು ಕನ್ನಡ ದೀಪ ನೃತ್ಯ ಮತ್ತು ಹಾಡು ಮೇಳೈಸುತ್ತಿತ್ತು

ಬಳಗದ ಪರಿಚಯ ಮತ್ತು ಅದರ ಧ್ಯೇಯೋದ್ದೇಶಗಳ ಬಗೆಗಿನ ನಿರೂಪಣೆಬಳಗದ ಬಗೆಗೆ ಗೌರವ ಮತ್ತು ಆತ್ಮೀಯತೆಯನ್ನುಮೂಡಿಸಿತು.  ಪೂರ್ವಭಾವಿಯಾಗಿ ನಡೆಸಲ್ಪಟ್ಟನಮ್ಮ ಶಾಲಾದಿನಗಳನ್ನು ನೆನಪಿಸುವಂಥ ಪ್ರಬಂಧ ಸ್ಪರ್ಧೆಆಶುಭಾಷಣ ಸ್ಪರ್ಧೆಮತ್ತು ಚಿತ್ರವಿನ್ಯಾಸ ಸ್ಪರ್ಧೆಗಳ ವಿಜೇತರಿಗೆ ಪುಸ್ತಕಗಳುಮುದ್ರಿಕೆಗಳ ರೂಪದಲ್ಲಿ ಬಹುಮಾನ ವಿತರಿಸಲಾಯಿತು.

ನಂತರದೀಪಾವಳಿಯ ನಭದಲ್ಲಿ ಒಂದಾದರೊಂದಂತೆ ಅಪ್ಪಳಿಸುವ ಹೂಬಾಣಗಳಂತೆಬಣ್ಣ-ಬಣ್ಣದ ರಂಜನೀಯ ಕಾರ್ಯಕ್ರಮಗಳುಸಭಿಕರನ್ನು ಕಾಲದ ಪರಿವಿರದಂತೆ ಹಿಡಿದಿಟ್ಟವುಭಾವಗೀತೆವಿಶೇಷ ವಾದ್ಯಸಂಗೀತಚಿತ್ರಗೀತೆನಗೆ ನಾಟಕಯಕ್ಷಗಾನದಹಾಡುಅರ್ಜುನ ಬಬ್ರುವಾಹನರ ವೀರಾವೇಶಸಮೂಹಗಾನರತ್ನನ ಪದಗಳ ಕುಡುಕನ ಕನ್ನಡಾಭಿಮಾನವನ್ನುಆಹಾವಹಿಸಿಕೊಂಡ ಕಿರು ನಾಟಕನಾಡಗೀತೆ ಹಾಗೂ ಹಲವು ಕನ್ನಡ ಚಿತ್ರಗೀತೆಗಳ ಸಮೂಹ ನೃತ್ಯ ಕಿವಿ-ಕಣ್ಣಿಗಾದರೆಕಾಯಿಹೋಳಿಗೆಬೆಳಗಾವಿ ಕುಂದಅವಲಕ್ಕಿ ಖಾರ ನಾಲಿಗೆಯನ್ನು ತಣಿಸಿದವು.

 ವಿನೋದಾವಳಿಗಳ ಮಧ್ಯೆ ಕನ್ನಡಿಗರಿಗೆಕನ್ನಡೇತರರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂತಹ ರಸಪ್ರಶ್ನೆಗಳುಅಣುಬಾಂಬ್ ಗಳಂತೆ ಸಿಡಿಯುತ್ತಾ ಎಲ್ಲರ ಜ್ಞಾನವನ್ನು ಒರೆಗೆ ಹಚ್ಚಿದವು.  ಕಾರ್ಯಕ್ರಮದ ಕೊನೆಗೆ ನಾಡಗೀತೆಯನ್ನುಹಾಡುತ್ತಿದ್ದಂತೆಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದಾಗ ಎಲ್ಲರ ಮೈಯಲ್ಲೂ ಮಿಂಚು ಹರಿದ ಭಾವ

ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನಸಮಯಪ್ರಜ್ಞೆಕಾರ್ಯದಕ್ಷತೆಪ್ರತಿಭೆಆತ್ಮೀಯತೆ ಮತ್ತು ಎಲ್ಲಕ್ಕೂಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು.