ರಾಮಮೂರ್ತಿ ನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದರಲ್ಲಿ ವಿಜೇತರಾದ ಸುಮಾರು ೯೨ ಮಕ್ಕಳಿಗೆ ಬಳಗದ ಪರವಾಗಿ " ಪ್ರಶಂಸಾ ಪತ್ರ"ಗಳನ್ನು ವಿತರಿಸಲಾಯಿತು. ಆ ದಿನದ ವಿವಿಧ ಕಾರ್ಯಕ್ರಮಗಳಲ್ಲಿ ಬಳಗದ ವಿನಯ್ ಕುಮಾರ್, ಅಂಜನ್, ಗುರುರಾಜರಾವ್ (ಅಂಜನ್ ಅವರ ತಂದೆ) ಮತ್ತು ಮಾಜಿ ನಗರಸಭೆ ಸದಸ್ಯರಾದ ಪ್ಯಾರೆಜಾನ್ ಅವರು ಭಾಗವಹಿಸಿದ್ದರು.
ಶಾಲೆಯಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿರುವುದರಿಂದ ಅವ್ಯವಸ್ಥೆಯ ಮಧ್ಯದಲ್ಲೇ ವ್ಯವಸ್ಥಿತವಾಗಿ, ಅತಿ ಉತ್ಸಾಹದಿಂದ ಮಕ್ಕಳು, ಉಪಾಧ್ಯಾಯರು ಪಾಲ್ಗೊಂಡಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತು. ಬಣ್ಣ ಬಣ್ಣದ ವೇಷಗಳಲ್ಲಿ ಮಕ್ಕಳು ನಡೆಸಿಕೊಟ್ಟ ಮನೋರಂಜನಾ ಕಾರ್ಯಕ್ರಮಗಳು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಒಂದು ಮರೆಯಲಾಗದ ದಿನ..
ಬಳಗದಿಂದ ವಿತರಿಸಲಾದ ಪ್ರಶಂಸಾ ಪತ್ರ
0 ಅಭಿಪ್ರಾಯಗಳು:
ಕಾಮೆಂಟ್ ಪೋಸ್ಟ್ ಮಾಡಿ